Wednesday, July 16, 2008

ಹುಟ್ಟು - ಸಾವು - ಧನ್ಯತೆ

ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ

ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ

ಮುಷ್ಟಿ ಬೂದಿಯ ತಿಂದು ಪುಸ್ಟವಾಗಲ್ಉ ಭತ್ತ

ಧನ್ಯವಾಯಿತು ಹುಟ್ಟು ಸಾವಿನಲ್ಲಿ

------------------------------------- - ದಿನಕರ ದೇಸಾಯಿ

ಈ ಸಾಲುಗಳನ್ನು ನನ್ನ ಮನ ಆಗಾಗ ಗುನುಗುನಿಸುತ್ತಿರುತ್ತದೆ . ಈ ಸಾಲುಗಳಲ್ಲಿ ಏನೋ ಒಂದು ಆಕರ್ಷಣೆ ಇದೆ . ಹುಟ್ಟಿದಾಗಿನಿಂದ ಏನನ್ನೂ ಸಾಧಿಸಲಾಗದ್ದಿದರೂ ಕವಿ ತನ್ನ ಸಾವಿನಲ್ಲಿ ತನ್ನ ಬದುಕಿನ ಧನ್ಯತೆಯನ್ನು ಪಡೆಯಲಿಚ್ಚಿಸುತ್ತಿದ್ದಾನೆ. ಎಷ್ಟು ಅರ್ಥಪೂರ್ಣವಾಗಿದೆ ಎಂದು ಅನ್ನಿಸುತ್ತದೆ . ನಾಲ್ಕು ಸಾಲುಗಳಲ್ಲಿ ಜೀವನದ ಧನ್ಯತೆಯನ್ನು ವರ್ಣಿಸಿರುವ ದೇಸಾಯಿ ಅವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್ .

No comments: