Wednesday, September 18, 2013

ಭಾವಾರ್ಪಣೆ

ನಿನ್ನ ಅಂದಿನ ಪ್ರೇಮದಲ್ಲಡಗಿತ್ತು ಕಾಮ-ಮೋಹದ ಛಾಯೆ ..
ಕೋಪತಾಪ-ಪಶ್ಚಾತ್ತಾಪಗಳಿಗೆ ಆಗಾಗ ಗುರಿಯಗುತಿತ್ತು ಆ ಮಾಯೆ ..

ನಾ ಎಂದೆ ಈ ಮಾಯೆ ಹುಟ್ಟಿಸಿದೆ ನನ್ನಲ್ಲಿ ಭಯ ...
ಛಾಯೆಯ ಕಳಚಿ ನೀ ಹೊರಬಂದರೆ ಕಾಣುವೆ ನನ್ನಲ್ಲಿ ನಿರ್ಭಯ ..

ಇಂದು ಕಾಮದ ಹಂಗ ತೊರೆದು ಆಗಿದೆ ಪ್ರೀತಿ ನಿಷ್ಕಳಂಕ..
ದೂರವಾಗಿದೆ ಎಂದನಿಸಿದೆ ನನ್ನ ಮನದ ಆತಂಕ..

ಬಯಸಿದೆ ಮನ ಇದು ಹೀಗೆ ಇರಲಿ ಕೊನೆತನಕ..
ತೋರಿಸುವೆಯ ಈ ಬಯಕೆಗೆ ಮರುಕ ?

ಏನೇ ಹೇಳು .. ಆ ಜಗನಿಯಾಮಕ..
ಆಡಿಸುತಿದ್ದಾನೆ ನಮ್ಮ ಕೈಯಲ್ಲಿ ನಾಟಕ..
ನನ್ನಲಂತೂ ಮೂಡಿದೆ ಕೌತುಕ ...
ಇದೆಲ್ಲ ಎಲ್ಲಿತನಕ ?